ಪ್ರಾಥಮಿಕ ವಿದ್ಯಾಭ್ಯಾಸ ಅಂದರೆ ಕೇವಲ ಬೌತಶಾಸ್ತ್ರಗಳ ವ್ಯಾಸಂಗ ಮತ್ತು ನಾವು ನಿತ್ಯ ಬಳಸುವ ವಸ್ತುಗಳನ್ನು ಯಂತ್ರದಿಂದ ತಯಾರಿಸುವದು ಇಷ್ಟೇ ಏನು? ಜೀವನದ ಸಮಸ್ಯೆಗಳನ್ನು ಬಿಡಿಸುವದು ಹೇಗೆ ಎಂಬುವದನ್ನು ಕಂಡು ಹಿಡಿಯಲು ಪ್ರಾಥಮಿಕ ಶಿಕ್ಷಣದಿಂದಾಗುವ ಉಪಯೋಗ ಈ ಯೋಚನೆಯೇ ಆದುನಿಕ ನಾಗರೀಕ ಜಗತ್ತನ್ನು ಗಾಡವಾದ ಆಲೋಚನೆಯಲ್ಲಿ ಮುಳುಗಿಸಿದೆ ಆದರೆ ನಮ್ಮ ದೇಸಿಯರು ಸಾವಿರ ವರುಷಗಳ ಹಿಂದೆಯೇ ಈ ಸಮಸ್ಯೆಯನ್ನು ಬಗೆ ಹರಿಸಿದ್ದರು.
ಶಿಕ್ಷಣ ವ್ಯಾಪಾರೀಕರಣವಾದ ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಬುದ್ಧಿವಂತಿಕೆಯಷ್ಟೇ ಅಲ್ಲದೆ ಪೋಷಕರ ಆರ್ಥಿಕ ಕ್ಷಮತೆಯೂ ನಿರ್ಣಾಯಕ ಪಾತ್ರವಹಿಸುತ್ತದೆ. ಒಂದೆರಡು ದಶಕಗಳ ಹಿಂದಿನವರೆಗೂ, ಪೋಷಕರ ಮನಸ್ಸಿನಲ್ಲಿ ಶಿಕ್ಷಣ ಬಹುದೊಡ್ಡ ಯೋಚನೆ-ಯೋಜನೆಯ ವಿಷಯವಾಗಿರಲಿಲ್ಲ. ಯಾವುದೋ ಸರ್ಕಾರಿ ಶಾಲೆ -ಕಾಲೇಜಿನಲ್ಲಿ ಶಿಕ್ಷಣ ಪಡೆದು ಉತ್ತಮ ಅಂಕಗಳಿಸಿದರೆ ಉದ್ಯೋಗ ಖಾತರಿ ಎಂದು ಯೋಚಿಸಿ ಸುಮ್ಮನಾಗಬಹುದಾಗಿದ್ದ ಆ ಪರಿಸ್ಥಿತಿ ಇಂದು ಇಲ್ಲ. ಎಲ್ಲದಕ್ಕೂ ಸರಿಯಾದ ಪೂರ್ವಾವಲೋಕನ ಇದ್ದರಷ್ಟೇ ನಮ್ಮ ಮಕ್ಕಳ ಶೈಕ್ಷಣಿಕ ಜೀವನ ಉತ್ತಮವಾಗಿ ಸಾಗಿಸಬಹುದು. ನಿಜ ಅಲ್ವಾ
ಇಂದಿನ ಮಕ್ಕಳು ಮುಂದೆ ಏನಾದಾರು, ಎಲ್ಲಿ ಅಧ್ಯಯನ ಪಡೆದಾರು ಎಂಬಿತ್ಯಾದಿ ಪ್ರಶ್ನೆಗೆ ಇಂದೇ ಉತ್ತರಿಸುವುದು ತುಸು ಕಷ್ಟವಾದರೂ ಆ ಬಗ್ಗೆ ಆಶಾದಾಯಕ ಯೋಚನೆ-ಯೋಜನೆ ಇದ್ದಾಗಲಷ್ಟೇ ದಿನನಿತ್ಯ ಬದುಕಿನಲ್ಲಿ ಆರ್ಥಿಕ ಸಂವಹನ ಸುಲಭ ಸಾಧ್ಯ. ಇಂತಹ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಯುವ ದಂಪತಿಗಳು ಮೊದಲೇ ಉಳಿತಾಯವನ್ನು ಪ್ರಾರಂಭಿಸುವುದು ಮುಖ್ಯವಾಗಿದೆ.
ಹೂಡಿಕೆ ಏಕೆ ಮಾಡಬೇಕು ಶಿಕ್ಷಣ ನಿಧಿಯ ಯೋಜನೆಯಲ್ಲಿ ಕೇವಲ ಕಾಲೇಜಿನ ಬೋಧನಾ ಶುಲ್ಕದ ಬಗ್ಗೆಯಷ್ಟೇ ಅಲ್ಲ, ಊಟ-ವಸತಿ, ಪ್ರಯಾಣಕ್ಕಾಗಿಯೂ ಒಂದಿಷ್ಟು ಮೊತ್ತವನ್ನು ಹೊಂದಿಸಿಡಬೇಕು. ಅನೇಕ ಬಾರಿ ನೀವು ಸಣ್ಣ ಪ್ರಮಾಣದಲ್ಲಿ ಶಿಕ್ಷಣಕ್ಕಾಗಿ ಹೂಡಿಕೆ ಪ್ರಾರಂಭಿಸಬಹುದು. ಆದರೆ ನಿಮ್ಮ ಆದಾಯ ಹೆಚ್ಚಾದಂತೆ, ಉಳಿತಾಯದ ಭಾಗವನ್ನು ಹೆಚ್ಚಿಸುತ್ತಾ ನೀವು ಹಿಂದಿನ ಕೊರತೆಯನ್ನು ನಿಧಾನವಾಗಿ ನೀಗಿಸಬಹುದು. ಒಂದು ವೇಳೆ ಹಾಗೊಂದು ಸಾಧ್ಯತೆಯನ್ನು ಸಫಲಗೊಳಿಸಬೇಕಾದರೂ ನಮ್ಮಲ್ಲಿ ಮೊದಲೇ ಸರಿಯಾದ ಪೂರ್ವ ತಯಾರಿ ಬೇಕು.
ಹೂಡಿಕೆ ಏಕೆ ಮಾಡಬೇಕು
ಶಿಕ್ಷಣ ನಿಧಿಯ ಯೋಜನೆಯಲ್ಲಿ ಕೇವಲ ಕಾಲೇಜಿನ ಬೋಧನಾ ಶುಲ್ಕದ ಬಗ್ಗೆಯಷ್ಟೇ ಅಲ್ಲ, ಊಟ-ವಸತಿ, ಪ್ರಯಾಣಕ್ಕಾಗಿಯೂ ಒಂದಿಷ್ಟು ಮೊತ್ತವನ್ನು ಹೊಂದಿಸಿಡಬೇಕು. ಅನೇಕ ಬಾರಿ ನೀವು ಸಣ್ಣ ಪ್ರಮಾಣದಲ್ಲಿ ಶಿಕ್ಷಣಕ್ಕಾಗಿ ಹೂಡಿಕೆ ಪ್ರಾರಂಭಿಸಬಹುದು. ಆದರೆ ನಿಮ್ಮ ಆದಾಯ ಹೆಚ್ಚಾದಂತೆ, ಉಳಿತಾಯದ ಭಾಗವನ್ನು ಹೆಚ್ಚಿಸುತ್ತಾ ನೀವು ಹಿಂದಿನ ಕೊರತೆಯನ್ನು ನಿಧಾನವಾಗಿ ನೀಗಿಸಬಹುದು. ಒಂದು ವೇಳೆ ಹಾಗೊಂದು ಸಾಧ್ಯತೆಯನ್ನು ಸಫಲಗೊಳಿಸಬೇಕಾದರೂ ನಮ್ಮಲ್ಲಿ ಮೊದಲೇ ಸರಿಯಾದ ಪೂರ್ವ ತಯಾರಿ ಬೇಕು.
ಹೂಡಿಕೆ ಯಾವುದರಲ್ಲಿ ಮಾಡಬೇಕು
ಹೂಡಿಕೆಗೆ ಅನೇಕ ಅವಕಾಶಗಳಿವೆ. ಒಟ್ಟಿನಲ್ಲಿ ಮುಂದೆ ನಿಮ್ಮ ಹಣದ ಅಗತ್ಯಕ್ಕೆ ತಕ್ಕಂತೆ ನಿಮ್ಮ ಉಳಿತಾಯದ ಮೊತ್ತವನ್ನು ಆರ್ಥಿಕ ಕ್ಷೇತ್ರದಲ್ಲಿರುವ ಅವಕಾಶಗಳಿಗೆ ಸರಿಯಾಗಿ ಹೊಂದಿಸಿಕೊಂಡು ಹೂಡಿದರೆ ಬಹುದೊಡ್ಡ ಮೊತ್ತವಾಗಿ ನಿಮಗೆ ಲಭಿಸಲಿದೆ. ಆದರೆ ಈ ನಿಟ್ಟಿನಲ್ಲಿ ಯಾರು ತಮ್ಮ ಆರಂಭಿಕ ಬದುಕಿನಲ್ಲಿ ಹೂಡಿಕೆಯನ್ನು ಆರಂಭಿಸುತ್ತಾರೋ ಅವರಿಗೆ ತಮ್ಮದೇ ಹೂಡಿಕೆಯ ಬಹು ದೊಡ್ಡ ಮೊತ್ತ ಅಚ್ಚರಿಯ ರೂಪದಲ್ಲಿ ಕಾದಿರುತ್ತದೆ ಎಂಬುದರಲ್ಲಿ ಸಂದೇಹ ಬೇಡ.
ಮ್ಯೂಚುವಲ್ ಫಂಡ್:
ನಿಮ್ಮ ಮಕ್ಕಳ ಶಿಕ್ಷಣಕ್ಕೆ ದೀರ್ಘಾವಧಿ ಹೂಡಿಕೆಯನ್ನು ಮಾಡಬಯಸುವುದಾದಲ್ಲಿ ಈಕ್ವಿಟಿ ಫಂಡ್‌ಗಳ ಬಗ್ಗೆ ನೀವು ಆದ್ಯತೆ ಕೊಡಬಹುದು. ಕಾರಣ ದೀರ್ಘಾವಧಿ ಹಂತದಲ್ಲಿ ಮಾರುಕಟ್ಟೆ ಏರುಪೇರು ನಿಮ್ಮನ್ನು ಅಷ್ಟೇನೂ ಬಾಧಿಸದು. ಮಾತ್ರವಲ್ಲ ನಿಮ್ಮ ಹೂಡಿಕೆ ನಿರಂತರ ಏಕಪ್ರಕಾರವಾಗಿರುವುದರಿಂದ ನಿಮಗೆ ಭಾರೀ ಪ್ರಮಾಣದ ಯಾವುದೇ ಹೊಡೆತ ಬೀಳಲಾರದು. ನಿಮ್ಮ ಹಣದ ಅಗತ್ಯ ಸನಿಹಕ್ಕೆ ಬಂದಂತೆ ನೀವು ಡೆಟ್ ಫಂಡ್ ಯೋಜನೆಗೆ ವರ್ಗಾಯಿಸಿ ನಿಶ್ಚಿಂತರಾಗಬಹುದು. ಅಗತ್ಯ ಬಂದಂತೆ ಅದರಿಂದ ಶಿಕ್ಷಣಕ್ಕಾಗಿ ಉಪಯೋಗಿಸಬಹುದು.
ಸುಕನ್ಯಾ ಸಮೃದ್ಧಿ ಯೋಜನೆ : ಇದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒದಗಿಬರುವ ಅತ್ಯುತ್ತಮ ಹೂಡಿಕೆ ಆಯ್ಕೆಗಳಲ್ಲಿ ಬಹು ಮುಖ್ಯವಾದುದು. ಇದು ಅಸಲು ಮೊತ್ತಕ್ಕೆ ಸರ್ಕಾರ ಒದಗಿಸುವ ಭದ್ರತೆಯೊಂದಿಗೆ ತೆರಿಗೆ-ಮುಕ್ತ ಬಡ್ಡಿದರವನ್ನೂ ಪಾವತಿಸುತ್ತದೆ. ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‍ನಲ್ಲಿ ಈ ಖಾತೆಯನ್ನು ತೆರೆಯಬಹುದು. ಹತ್ತು ವರ್ಷದೊಳಗಿನ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಇದನ್ನು ತೆರೆಯಬಹುದು. ಹೆಣ್ಣು ಮಗುವಿಗೆ 18 ತುಂಬಿದಾಗ
ಶೇ 50 ರಷ್ಟು ಮೊತ್ತವನ್ನು ಉನ್ನತ ಶಿಕ್ಷಣಕ್ಕಾಗಿ ನಗದೀಕರಿಸುವ ಅವಕಾಶವಿರುತ್ತದೆ ಹಾಗೂ 21 ನೇ ವಯಸ್ಸಿನಲ್ಲಿ ಸಂಪೂರ್ಣ ಮೊತ್ತ ಲಭಿಸುತ್ತದೆ. ವಾರ್ಷಿಕವಾಗಿ ಒಂದು ಸಾವಿರ ರೂಪಾಯಿಗಳಿಂದ ತೊಡಗಿ 1.5 ಲಕ್ಷದ ತನಕ ಈ ಖಾತೆಗೆ ಹಣ ಜಮಾ ಮಾಡುವ ಅವಕಾಶ ಇರುತ್ತದೆ. ಮೊದಲ 14 ವರ್ಷ ಈ ಖಾತೆಗೆ ನಿರಂತರ ಹಣ ಹೂಡಬೇಕು. ಅಸಲು ಹಾಗೂ ಶೇ 8.5 ರ ಬಡ್ಡಿ ದರದಲ್ಲಿ 21ನೇ ವರ್ಷದಲ್ಲಿ ಸಂಪೂರ್ಣ ಮೊತ್ತ ಸಿಗುತ್ತದೆ. ವಾರ್ಷಿಕವಾಗಿ 1.5 ಲಕ್ಷಗಳಂತೆ ಹೂಡಿಕೆ ಮಾಡಿದ ಮೊತ್ತ 14 ವರ್ಷಗಳ ತರುವಾಯ ಸುಮಾರು 41 ಲಕ್ಷವಾಗಿರುತ್ತದೆ, 21 ವರ್ಷಗಳ ತರುವಾಯ 72 ಲಕ್ಷಗಳಾಗುತ್ತದೆ ಎಂಬುದನ್ನು ನೆನಪಿಡಿ.
ಮಕ್ಕಳ ಶೈಕ್ಷಣಿಕ ವಿಮಾ ಯೋಜನೆ
ಮಕ್ಕಳ ಶೈಕ್ಷಣಿಕ ವಿಮಾ ಯೋಜನೆಯ ಮೂಲ ಉದ್ದೇಶವೆಂದರೆ, ಯಾವುದೇ ಸಂದರ್ಭದಲ್ಲಿ ಪಾಲಿಸಿ ತೆಗೆದುಕೊಂಡ ಪೋಷಕರು ಮೃತರಾದರೆ ಉಳಿದ ಪಾಲಿಸಿ ಕಂತುಗಳನ್ನು ವಿಮಾ ಕಂಪನಿಯೇ ಭರಿಸುತ್ತದೆ. ಇದರಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸದ ನಿರಂತರತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ. ನಿಗದಿಪಡಿಸಿದ ವರ್ಷ ಕಳೆದ ಬಳಿಕ ಈ ಮೊತ್ತ ಮಕ್ಕಳ ವಿದ್ಯಾಭ್ಯಾಸಕ್ಕೆ ಲಭ್ಯವಾಗುತ್ತದೆ. ಮಾತ್ರವಲ್ಲ ಇದರ ಭದ್ರತೆಯ ಮೇಲೆ ಅಗತ್ಯ ಬಿದ್ದರೆ ಸಾಲವನ್ನೂ ಪಡೆಯಬಹುದು. ಪೋಷಕರಿಗೆ ಆದಾಯ ತೆರಿಗೆಗೆ ಸಂಬಂಧಪಟ್ಟಂತೆ ತೆರಿಗೆ ವಿನಾಯಿತಿಯೂ ಸಿಗುತ್ತದೆ. ಸಾಮಾನ್ಯವಾಗಿ ಪಾಲಿಸಿ ಕಂತಿನ ಹತ್ತು ಪಟ್ಟು ವಿಮಾ ಭದ್ರತೆ ದೊರೆಯುತ್ತದೆ. ಹೀಗಿದ್ದರೂ ಯಾವುದೇ ವಿಮಾ ಯೋಜನೆಗಳನ್ನು ನಿಧಿ ಸಂಗ್ರಹಿಸುವ ಹೂಡಿಕೆಗೆ ಪರ್ಯಾಯ ಮಾರ್ಗವೆಂದು ತಿಳಿಯಬಾರದು. ಹೀಗಾಗಿ ಇದೂ ನಿಮ್ಮ ಒಟ್ಟು ಹೂಡಿಕೆಯ ಭಾಗವಾಗಿರಲಿ.
No comments:
Post a Comment